• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರಸ್ತೆ ಬಿಡಿಸಿಕೊಡದ ಪಿಡಿಒ ಮೇಲೆ ಕ್ರಮಕ್ಕೆ ಆಗ್ರಹ

Nov 16 2024, 12:33 AM IST
ಗ್ರಾಮಠಾಣಾ ಜಾಗಕ್ಕೆ ಸೇರಿದ ಸುಮಾರು ೧೨ ಅಡಿ ಜಾಗದಲ್ಲಿ ಕೂಡಲೇ ರಸ್ತೆ ಬಿಡಿಸಿಕೊಡುವಂತೆ ಬೇಲೂರು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮೌಖಿಕವಾಗಿ ಸ್ಥಳದಲ್ಲಿ ಪಿಡಿಒಗೆ ಆದೇಶ ಮಾಡಿದ್ದರೂ ಸಹ ರಸ್ತೆ ಬಿಡಿಸಿಕೊಡುವಲ್ಲಿ ವಿಫಲರಾಗಿರುವ ಪಿಡಿಒ ರಘುನಾಥರವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಕುಟುಂಬವೊಂದು ಡಿಸಿ ಕಚೇರಿ ಮುಂದೆ ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.

ಹಳ್ಳಿಗಾಡಿನ ಜನರಿಗೂ ಗುಣಮಟ್ಟದ ರಸ್ತೆ ಸಿಗಬೇಕು

Nov 15 2024, 12:36 AM IST
ಎತ್ತಿನಹೊಳೆ ಯೋಜನೆಯಡಿ ೫೦ ಲಕ್ಷ ರು.ವೆಚ್ಚದಲ್ಲಿ ತಾಲೂಕಿನ ಬಾಗಿಲ ಘಟ್ಟದಿಂದ ಜೋಯಿಸರ ಕೊಪ್ಪಲಿನವರಗೆ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಗುರುವಾರ ಚಾಲನೆ ನೀಡಿದರು. ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಿ ಸಂಚಾರ ಸುಗಮವಾಗಿಸಲು ಈ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು.

ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಸೂಚನೆ: ಟಿ.ಡಿ.ರಾಜೇಗೌಡ ಮಾಹಿತಿ

Nov 15 2024, 12:35 AM IST
ನರಸಿಂಹರಾಜಪುರ, ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಖಾಂಡ್ಯ, ಬಾಳೆಹೊನ್ನೂರು ಭಾಗದಲ್ಲಿನ ಲೋಕೋಪಯೋಗಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಗುಣಮಟ್ಟದ ಕಾಮಗಾರಿ ಕೈಗೊಂಡು ಮುಚ್ಚಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ರಸ್ತೆ ಗುಂಡಿಗಳಿಗೆ ಬಂತು ನಾವೀನ್ಯತೆಯ ಕಾಯಕಲ್ಪ

Nov 15 2024, 12:34 AM IST
ರಸ್ತೆಯಲ್ಲಿ ಹೋಗುವಾಗ ಎದುರಾಗುವ ಗುಂಡಿಗಳು ಅದೆಷ್ಟೋ ಸಂದರ್ಭದಲ್ಲಿ ವಾಹನ ಸವಾರರಿಗೆ ಅಪಘಾತ ಉಂಟು ಮಾಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಗುಂಡಿಗಳದ್ದೆ ಕಾರುಬಾರು. ಇಂತಹ ಸವಾಲುಗಳನ್ನು ಅರಿತ ಜೆ.ಎನ್.ಎನ್‌ ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ ''''ಜೆ.ಎನ್.ಎನ್.ಸಿ.ಇ ಕೋಲ್ಡ್ ಪಾಟ್ ಹೋಲ್ ಮಿಕ್ಸ್'''' ಎಂಬ ಉತ್ಪನ್ನ ಆವಿಷ್ಕರಿಸಿದೆ.

ರಸ್ತೆ, ಡಿವೈಡರ್‌, ವಿದ್ಯುತ್ ದೀಪ ಕಾಮಗಾರಿಗಳ ಪರಿಶೀಲನೆ

Nov 15 2024, 12:33 AM IST
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ವ್ಯಾಪ್ತಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದಿರುವ ರಸ್ತೆ ಕಾಮಗಾರಿ, ರಸ್ತೆ ಡಿವೈಡರ್, ರೋಡ್ ಲೈಟ್ ಕಾಮಗಾರಿಗಳು ಕಳಪೆಯಾಗಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ತಾಲೂಕಿನ ಭ್ರಷ್ಟಾಚಾರ ವಿರೋಧಿ ವೇದಿಕೆ ಕಾರ್ಯದರ್ಶಿ ಸೊರಟೂರು ಹನುಮಂತಪ್ಪ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಮಂಗಳವಾರ ಲೋಕಾಯುಕ್ತ ಸಂಸ್ಥೆ ಮುಖ್ಯ ಅಭಿಯಂತರರಾದ ಶುಭ ಟಿ. ಅವಳಿ ತಾಲೂಕುಗಳಿಗೆ ಭೇಟಿ ನೀಡಿ, ಕಾಮಗಾರಿಗಳ ಸ್ಥಳ ಪರೀಶೀಲನೆ ನಡೆಸಿದ್ದಾರೆ.

ವಕ್ಪ್ ರದ್ದುಗೊಳಿಸುವಂತೆ ರಸ್ತೆ ರೋಖೋ ಚಳವಳಿ

Nov 14 2024, 12:53 AM IST
ಸುಮ್ಮನೆ ಕುಳಿತರೆ ನಾಳೆ ನಮ್ಮ ಮನೆ ಹಾಗೂ ಪಕ್ಕದ ಮನೆಯ ಜಾಗವನ್ನು ಸಹ ತಮ್ಮದು ಎಂದು ವಕ್ಫ್ ಬೋರ್ಡ್ ಹೇಳಿಕೊಳ್ಳಲು ಮುಂದಾಗುತ್ತದೆ. ಸರ್ಕಾರವು ತಕ್ಷಣವೇ ಸಚಿವ ಜಮೀರ್ ಆಹ್ಮದ ಅವರನ್ನು ಸಂಪುಟದಿಂದ ಕೈಬಿಡಬೇಕು ಹಾಗೂ ರೈತರ, ಮಠ, ಮಂದಿರ ಹಾಗೂ ಸಾರ್ವಜನಿಕರ ಪಹಣಿಗಳಲ್ಲಿ ವಕ್ಫ್ ಎಂದು ಹೇಳುವ ವಕ್ಫ್ ಬೊರ್ಡ್ ಕಿತ್ತಿ ಹಾಕಬೇಕು

ಪರ್ಯಾಯ ರಸ್ತೆ ಭರವಸೆ: ಹೆದ್ದಾರಿ ತಡೆ ಪ್ರತಿಭಟನೆ ಮುಂದೂಡಿಕೆ

Nov 13 2024, 12:08 AM IST
ಇನ್ನೆರಡು ದಿನಗಳಲ್ಲಿ ಪಿಡಬ್ಲ್ಯೂಡಿ ಕಾರ್ಯ ನಿರ್ವಾಹಕ ಎಂಜಿನಿಯರ್ ಹಾಗೂ ಇತರ ಅಧಿಕಾರಿಗಳ ತಂಡ ಉಳಾಯಿಬೆಟ್ಟಿಗೆ ಭೇಟಿ ನೀಡಿ, ಈಗಿರುವ ಸೇತುವೆ ಬದಿಯಲ್ಲಿ ತಾತ್ಕಾಲಿಕವಾಗಿ ಮಣ್ಣಿನ ರಸ್ತೆ ನಿರ್ಮಿಸುವ ಬಗ್ಗೆ ಪರಿಶೀಲಿಸಲಾಗುವುದು. ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಮಂಗಳೂರು ಎಸಿ ಹರ್ಷವರ್ಧನ ಭರವಸೆ ನೀಡಿದರು.

10 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ

Nov 13 2024, 12:06 AM IST
ದೊಡ್ಡಬಳ್ಳಾಪುರ: ಮಂದಗತಿಯಲ್ಲಿ ಸಾಗುತ್ತಿರುವ ಬೆಂಗಳೂರು- ತುಮಕೂರು ಹೆದ್ದಾರಿ 6 ಪಥದ ರಸ್ತೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸುವಂತೆ‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕೇಂದ್ರ ಜಲಶಕ್ತಿ, ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಸೂಚಿಸಿದರು.

ಬಿದರಹಳ್ಳಿ ಮೂರ್ ಬಂದ್ ಹಳ್ಳಿಯ ರೈತರು ತಿರುಗಾಡುವ ರಸ್ತೆ ಸರ್ಕಾರಕ್ಕೆ ಕಾಣುತ್ತಿಲ್ಲವೇ

Nov 11 2024, 11:51 PM IST
ಮುಖ್ಯಮಂತ್ರಿಗಳು ಬರುತ್ತಾರೆ ಎಂದು ರಾಷ್ಟ್ರೀಯ ಹೆದ್ದಾರಿಗಳ ಹಳ್ಳಕೊಳ್ಳ ಮುಚ್ಚುತ್ತಾರೆ. ಇದೇ ಕ್ಷೇತ್ರದ ಕಾಡಂಚಿನ ಭಾಗದಲ್ಲಿರುವ ರೈತರು ಜಾನುವಾರುಗಳು ತಿರುಗಾಡುವ ರಸ್ತೆ ಅವ್ಯವಸ್ಥೆಯಾಗಿದೆ. ಇದು ಶಾಸಕರಿಗೆ, ಅಧಿಕಾರಿಗಳಿಗೆ ಕಾಣುತ್ತಿಲ್ಲವೇ?

ತನಿಮಡಗು ರಸ್ತೆ ಗುಂಡಿಗೆ ಮುಕ್ತಿ ನೀಡಲಿ

Nov 11 2024, 11:49 PM IST
ತನಿಮಡಗು ಗ್ರಾಮದ ಮೂಲಕ ಬಿಸಾನತ್ತಂ ರೈಲು ನಿಲ್ದಾಣ, ರಾಮಸಂದ್ರ, ಬೋಡಗೊರ್ಕಿ ಹಾಗೂ ಆಂಧ್ರದ ಕುಪ್ಪಂಗೂ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಗುಂಡಿಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪ್ರತಿನಿತ್ಯ ಪರದಾಡುವಂತಾಗಿದೆ. ವರ್ಷಗಳೇ ಕಳೆದರೂ ರಸ್ತೆ ದುರಸ್ತಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲ.
  • < previous
  • 1
  • ...
  • 35
  • 36
  • 37
  • 38
  • 39
  • 40
  • 41
  • 42
  • 43
  • ...
  • 107
  • next >

More Trending News

Top Stories
ಎಚ್ಚರ, ಆಪರೇಷನ್‌ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್‌
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್‌ ವರಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved