ರೇಷ್ಮೆ ಅಭಿವೃದ್ಧಿಗೆ ಬಸವರಾಜು ವರದಿ ಅನುಷ್ಠಾನಗೊಳಿಸಿ
Sep 11 2024, 01:02 AM ISTರಾಮನಗರ: ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಬಸವರಾಜು ಸಮಿತಿ ವರದಿಯನ್ನು ಅನುಷ್ಠಾನಗೊಳಿಸಬೇಕು. ಹೊಸ ಮಾರುಕಟ್ಟೆ ಬದಲಿಗೆ, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮಾರುಕಟ್ಟೆಗೆ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿಪಡಿಸಬೇಕು. ಹಿಪ್ಪು ನೇರಳೆ ಗಿಡಕ್ಕೆ ತಗಲಿರುವ ರೋಗ ಸಮಸ್ಯೆ ನಿವಾರಿಸಬೇಕು. ಜಿಲ್ಲೆಯಲ್ಲಿ ನಿಷ್ಕ್ರಿಯಗೊಂಡಿರುವ ರೇಷ್ಮೆ ಇಲಾಖೆ ಕೆಎಸ್ಎಂಬಿ ಸಂಸ್ಥೆಯನ್ನು ಪುನಃಶ್ಚೇತನಗೊಳಿಸಬೇಕು. ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಬೇಕು ಎಂದು ರೇಷ್ಮೆ ಬೆಳಗಾರರು ಆಗ್ರಹಿಸಿದರು.