15 ದಿನದೊಳಗೆ ಕೆಎಫ್ಡಿ ಸಮಗ್ರ ಸಮೀಕ್ಷೆ ವರದಿ ಸಿದ್ಧಪಡಿಸಿ
Nov 26 2023, 01:15 AM ISTಬಹಳ ಮುಖ್ಯವಾಗಿ ತಾಲೂಕು ಆರೋಗ್ಯಾಧಿಕಾರಿ, ಗ್ರಾಪಂ ಪಿಡಿಓ ಹಾಗೂ ವೆಟರನರಿ ಸಿಬ್ಬಂದಿಗಳು ಎಚ್ಚರ ವಹಿಸಬೇಕು. ಮಾತ್ರವಲ್ಲದೇ ಎಲ್ಲಾ ಇಲಾಖೆಗಳೂ ಇವರಿಗೆ ಸಹಕಾರ ನೀಡುವುದು ಅಗತ್ಯ. ಈ ಮೊದಲು ರೋಗ ಉಲ್ಬಣಗೊಂಡಿರುವ ಮತ್ತು ಜೀವಹಾನಿ ಸಂಭವಿಸಿರುವ ಪ್ರದೇಶದಲ್ಲಿ ನಿರಂತರ ಸಭೆ ನಡೆಸಬೇಕು. ಜನಪ್ರತಿನಿಧಿಗಳ ಸಹಕಾರವನ್ನು ಪಡೆದು ಗ್ರಾಪಂ ಮಟ್ಟದಲ್ಲಿ ಆಗಾಗ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇದು ಜನರ ಜೀವದ ಪ್ರಶ್ನೆಯಾಗಿದ್ದು. ಉದಾಸೀನತೆ ತೋರುವವರ ವಿರುದ್ಧ ಬಿಗಿ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದರು.