ಕಾಂತರಾಜ ವರದಿ ಜಾರಿಯಾದಲ್ಲಿ ಸಂವಿಧಾನಕ್ಕೆ ಗೌರವ
Dec 12 2023, 12:45 AM ISTಸಂವಿಧಾನದ ಪರಿಚ್ಛೇದ 15(4), 16(4) ಹಾಗೂ ಪರಿಚ್ಛೇದ 340ರ ಉಲ್ಲೇಖದಂತೆ ರಾಜ್ಯದಲ್ಲಿ ಶಾಶ್ವತ ಹಿಂದುಳಿದ ಆಯೋಗ ಅನುಷ್ಠಾನಗೊಳಿಸಿ ಎಚ್.ಕಾಂತರಾಜ ಆಯೋಗ ನೇಮಕಗೊಳಿಸಲಾಗಿದೆ. ಈ ಆಯೋಗ ನೂರಾರು ಕೋಟಿ ರು. ವೆಚ್ಚದಲ್ಲಿ, ರಾಜ್ಯದ ಪ್ರತಿಯೊಂದು ಮನೆ ಮನೆಗೆ ತೆರಳಿ ನಿಖರವಾದ ಮಾಹಿತಿಗಳನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಿದೆ. ಆದರೆ, ಈ ವರದಿ ಇದುವರೆಗೂ ಸರ್ಕಾರ ಸ್ವೀಕರಿಸದೇ ಜಾರಿಗೆ ಹಿಂದೇಟು ಹಾಕಿ, ಸಂವಿಧಾನ ಆಶಯಗಳಿಗೆ ಅವಮಾನ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತು ಎಚ್.ಕಾಂತರಾಜ ಆಯೋಗದ ವರದಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.