ಸರ್ಕಾರಿ ಶಾಲೆಗಳಲ್ಲಿ ವಿಶ್ವಮಟ್ಟದ ಶಿಕ್ಷಣ ಅಗತ್ಯ: ವಿನಯಕುಮಾರ್
Aug 14 2025, 01:00 AM ISTಸರ್ಕಾರಿ ಅಥವಾ ಖಾಸಗಿ ಶಾಲೆಗಳೇ ಆಗಿರಲಿ. ಎಲ್ಲ ಶಾಲೆಗಳಲ್ಲೂ ಪ್ರತಿ ಮಗುವಿಗೂ ಗುಣಮಟ್ಟದ, ಸಮಾನ ಶಿಕ್ಷಣ ಸಿಗುವಂತಾಗಿ, ಶಿಕ್ಷಣದಲ್ಲಿನ ಅಸಮಾನತೆ ತೊಲಗಬೇಕು. ಆಗ ಮಾತ್ರ ಬಡವರು, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲ ವರ್ಗದ ಮಕ್ಕಳೂ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯಕುಮಾರ ಹೇಳಿದ್ದಾರೆ.