ಹುಬ್ಬಳ್ಳಿ ಗುರುಕುಲ ಮಾದರಿ ಶಿಕ್ಷಣ ಕೇಂದ್ರಕ್ಕೆ ಗ್ರಹಣ
Aug 07 2024, 01:03 AM ISTಸದ್ಯ ಗುರುಕುಲ ಮಾದರಿಯಲ್ಲಿ 4 ವರ್ಷದ ಭಾರತೀಯ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಗುರುಕುಲ ಶಿಕ್ಷಣ ಕೇಂದ್ರ ಕಳೆದ ಫೆ. 28ರ ವರೆಗೂ ಜಿಲ್ಲಾಧಿಕಾರಿಯ ನಿರ್ವಹಣೆಯಲ್ಲೇ ಇತ್ತು. ಬಳಿಕ ವಿವಿಗೆ ಹಸ್ತಾಂತರಿಸಲಾಗಿದ್ದು, ಮೇ ತಿಂಗಳಲ್ಲಿ ವಿವಿಯ ಕುಲಪತಿ ಮತ್ತು ಕುಲಸಚಿವರು ಆಗಮಿಸಿ ಪತ್ರವನ್ನು ಜಿಲ್ಲಾಧಿಕಾರಿಯಿಂದ ಪಡೆದುಕೊಂಡಿದ್ದಾರೆ.