ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವಂತೆ ಕಾರ್ಯಕರ್ತರು, ಮುಖಂಡರಿಂದ ತೀವ್ರ ಒತ್ತಡವಿದೆ. ಆಕಾಂಕ್ಷಿತರ ಪಟ್ಟಿಯಲ್ಲಿ ಪುಟ್ಟಣ್ಣ, ಅಶ್ವಥ್, ರಘುನಂದನ್ ಹೆಸರುಗಳೂ ಇವೆ. ನೂರಕ್ಕೆ ನೂರು ಡಿ.ಕೆ.ಸುರೇಶ್ ಅವರನ್ನೇ ಕಣಕ್ಕಿಳಿಸಬೇಕೆಂದು ತೀವ್ರ ಒತ್ತಾಯವಿದೆ.
ನಾನು ಯಾರಿಗೂ ಠಕ್ಕರ್ ಕೊಡಲು ಇಲ್ಲಿಗೆ ಬಂದಿಲ್ಲ. ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಉದ್ಯೋಗ ಮೇಳ ಮಾಡುತ್ತಿಲ್ಲ. ಜನರು ನನ್ನನ್ನು ನಂಬಿ ಮತ ಕೊಟ್ಟಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಇನ್ನೊಬ್ಬರು ಕೊಡುವ ಸರ್ಟಿಫಿಕೇಟ್‌ಗೆ ಕೆಲಸ ಮಾಡುವವನು ನಾನಲ್ಲ.