ಕೇಂದ್ರ ಅನುಮತಿ ಕೊಟ್ಟರೆ ಮಹದಾಯಿ ಯೋಜನೆ ಪೂರ್ಣಗೊಳಿಸಲು ಸಿದ್ಧ-ಸಚಿವ ಎಚ್ಕೆಪಿ
Jul 22 2025, 12:01 AM IST45 ವರ್ಷದ ನಂತರ ರೈತನ ವೀರಗಲ್ಲಿನ ಸ್ಥಳದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿದ್ದರಿಂದ ರೈತರಿಗೆ ಗೌರವ ಹೆಚ್ಚಾಗಿದೆ. ಮಹದಾಯಿ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಸಿದ್ಧವಿದ್ದು, ಕೇಂದ್ರ ಸರ್ಕಾರ ಒಂದಿಲ್ಲೊಂದು ರೀತಿಯಿಂದ ಅಡೆತಡೆ ಮಾಡುತ್ತಿದೆ. ಸಹಕಾರ ಸಿಗುತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಿ.ಸಿ. ಪಾಟೀಲರು ಕೇಂದ್ರದಿಂದ ಅನುಮತಿ ಕೊಡಿಸಿದರೆ, ನಮ್ಮ ಸರ್ಕಾರ ಈಗಲೇ ಕಾಮಗಾರಿ ಪ್ರಾರಂಭಿಸುತ್ತದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.