ಜಿಲ್ಲಾ ಮರಳು ಸಮಿತಿಗಳಿಂದಲೇ ಬ್ಲಾಕ್ ವಿಲೇಗೆ ಕ್ರಮ: ಗಣಿ ಸಚಿವ
Dec 04 2024, 12:32 AM ISTರಾಜ್ಯದಲ್ಲಿ ಮರಳಿನ ಅಭಾವ ತಪ್ಪಿಸಿ, ಜನರಿಗೆ ಸುಲಭವಾಗಿ ಮತ್ತು ಕೈಗೆಟುವ ದರದಲ್ಲಿ ಮರಳು ಸಿಗಲೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಮರಳು ನೀತಿ ಜಾರಿಗೊಳಿಸಿದೆ. ಬಜೆಟ್ನಲ್ಲಿ ಘೋಷಿಸಿದ್ದಂತೆ ಸಮಗ್ರ ಮರಳು ನೀತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಷ್ಠಾನಗೊಳಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.