ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿ, ಸಿಬ್ಬಂದಿ ನೇಮಿಸಿ

Jan 08 2024, 01:45 AM IST
ಸರ್ಕಾರಿ, ಖಾಸಗಿ ಯಾವುದೇ ಶಾಲೆ-ಕಾಲೇಜು ಆಗಿರಲಿ. ಮೂಲಸೌಲಭ್ಯಗಳು ಇಲ್ಲದಿದ್ದರೆ ಶಿಕ್ಷಣ ಕ್ರಾಂತಿ ಸಾಧ್ಯವಿಲ್ಲ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬಹುಮುಖ್ಯವಾಗಿ ಶೌಚಾಲಯ ಹಾಗೂ ಸಿಬ್ಬಂದಿ ಕೊರತೆ ಗಂಭೀರವಾಗಿದೆ. ಶೌಚಾಯಲಗಳನ್ನು ಮಕ್ಕಳಿಂದಲೇ ಸ್ವಚ್ಛಗೊಳಿಸುವ ಕ್ರಮಕ್ಕೆ ಪೋಷಕರಿಂದ ಭಾರೀ ವಿರೋಧ, ಆಕ್ಷೇಪ ವ್ಯಕ್ತವಾಗಿ, ಬಹಳ ದೊಡ್ಡ ಅವಾಂತರಗಳೂ ಸೃಷ್ಟಿಯಾಗಿರುವುದು ಶಿಕ್ಷಕರನ್ನು ತಬ್ಬಿಬ್ಬಾಗಿದ್ದಾರೆ. ಈ ಕಾರಣಕ್ಕೆ ಭದ್ರಾವತಿಯಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮನವಿ ಸಲ್ಲಿಸಿ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಿಸಬೇಕು, ಸ್ವಚ್ಚತಾ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.