ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ಸ್ವಚ್ಛತೆ ಹೊಣೆ ಯಾರದ್ದು?
Jan 04 2024, 01:45 AM ISTಸರ್ಕಾರಿ ಶಾಲೆ ಎಂದರೆ ಅಲ್ಲಿ ಅಗತ್ಯ ಮೂಲಸೌಕರ್ಯಗಳು ಇಲ್ಲ ಎಂದೇ ಅರ್ಥ ಎಂಬಂಥ ದುಸ್ಥಿತಿ ಕರ್ನಾಟಕ ರಾಜ್ಯದಲ್ಲಿ ಇರುವುದು ಸುಳ್ಳಲ್ಲ. ಪ್ರತಿನಿತ್ಯ ಪತ್ರಿಕೆ, ಟಿ.ವಿ.ಗಳಲ್ಲಿ ಸರ್ಕಾರಿ ಶಾಲೆಗಳ ಅಧೋಗತಿ ವರದಿಯಾಗುತ್ತಿದ್ದರೂ, ಸರ್ಕಾರದಿಂದ ಸಾಮೂಹಿಕವಾಗಿ ಸೌಲಭ್ಯಗಳ ಕೊರತೆ ನೀಗಿಸುವಲ್ಲಿ ಪ್ರಮುಖ ಕ್ರಮಗಳು ಆಗುತ್ತಿಲ್ಲ. ಈ ವಿಷಯಗಳ ಬಗ್ಗೆಯೇ ವಿದ್ಯಾರ್ಥಿಗಳಿಂದ ನಡೆದ ಮಕ್ಕಳ ಗ್ರಾಮಸಭೆಯಲ್ಲೂ ಪ್ರತಿಧ್ವನಿಸಿವೆ. ಸೊರಬ ತಾಲೂಕಿನ ಕಿಗ್ಗ ಗ್ರಾಮದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಜನನಾಯಕರು, ಅಧಿಕಾರಿಗಳಿಗೆ ಶಾಲಾ ಶೌಚಾಲಯ ವಿಷಯಗಳ ಕುರಿತು ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದಾರೆ.