ರಾಜ್ಯಾದ್ಯಂತ ಸರ್ಕಾರಿ ಪದವಿ ಕಾಲೇಜಿಗೆ ಅಘೋಷಿತ ರಜೆ

Dec 15 2023, 01:31 AM IST
ರಾಜ್ಯಾದ್ಯಂತ ಇರುವ ಸುಮಾರು 432 ಸರ್ಕಾರಿ ಪದವಿ ಕಾಲೇಜುಗಳು ಕಳೆದ 22 ದಿನಗಳಿಂದ ಅಘೋಷಿತ ರಜೆಯಲ್ಲಿವೆ. ಉಪನ್ಯಾಸಕರು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ನಿತ್ಯವೂ ಕಾಲೇಜಿಗೆ ಬಂದು, ಹರಟೆ ಹೊಡೆದು ಮನೆಗೆ ವಾಪಸಾಗುವಂತಾಗಿದೆ. ಇನ್ನೇನು ತಿಂಗಳು ಕಳೆದರೆ ಪರೀಕ್ಷೆ ಇರುವ ಹೊತ್ತಲ್ಲಿ ಪದವಿ ಕಾಲೇಜು ತರಗತಿ ನಡೆಯದೇ ಇರುವುದರಿಂದ ವಿದ್ಯಾರ್ಥಿಗಳು ಆಂತಕಗೊಂಡಿದ್ದಾರೆ. ರಾಜ್ಯದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ 11,500 ಅತಿಥಿ ಉಪನ್ಯಾಸಕರು ಪಾಠ ಮಾಡುವ ಬದಲು ತಮ್ಮ ಸೇವಾ ಕಾಯಮಾತಿಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ನವೆಂಬರ್ 23ರಿಂದ ನಿರಂತರವಾಗಿ ಧರಣಿ ಪ್ರಾರಂಭಿಸಿದ್ದಾರೆ. 22 ದಿನಕ್ಕೆ ಹೋರಾಟ ಕಾಲಿಟ್ಟಿದೆ.

ಸರ್ಕಾರಿ ಆರೋಗ್ಯ ಕಾರ್ಡ್‌ನಡಿ ಇನ್ನು ದೇಶಾದ್ಯಂತ ಚಿಕಿತ್ಸೆ

Dec 07 2023, 01:15 AM IST
ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕದಡಿ ಬಿಪಿಎಲ್‌, ಎಪಿಎಲ್‌ ಕುಟುಂಬಗಳಿಗೆ ಹೊಸ ಕಾರ್ಡ್‌. ಸಿದ್ದು ಬಿಡುಗಡೆ. 6 ತಿಂಗಳಲ್ಲಿ 5 ಕೋಟಿ ಕಾರ್ಡ್‌ ವಿತರಿಸುವ ಗುರಿ. ಶೀಘ್ರದಲ್ಲಿ ಜನರಿಗೆ ಸಿಗಲಿದೆ ಕಾರ್ಡ್‌. ನೂತನ ಕಾರ್ಡ್‌ಗಳು ರಾಷ್ಟ್ರೀಯ ಪೋರ್ಟಲ್‌ ಜತೆ ಸಂಯೋಜನೆಗೊಂಡಿವೆ. ಹೀಗಾಗಿ ಇತರೆ ರಾಜ್ಯಗಳಲ್ಲೂ ಈ ಆರೋಗ್ಯ ಕಾರ್ಡ್‌ನಿಂದ ಚಿಕಿತ್ಸೆ ಲಭ್ಯ. ಬಿಪಿಎಲ್‌ ಕುಟುಂಬದಾರರಿಗೆ ವಾರ್ಷಿಕ 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ. ಚಿಕಿತ್ಸೆ ವೆಚ್ಚಕ್ಕೆ ಶೇ.66 ಅನುದಾನ ರಾಜ್ಯ, ಶೇ.34 ಅನುದಾನ ಕೇಂದ್ರದಿಂದ. ಎಪಿಎಲ್‌ ಕುಟುಂಬಗಳಿಗೆ 5 ಲಕ್ಷ ರು. ಪೈಕಿ 1.5 ಲಕ್ಷ ರು.ವರೆಗೆ ಚಿಕಿತ್ಸೆ ಉಚಿತ. 5 ಲಕ್ಷ ರು. ಚಿಕಿತ್ಸಾ ವೆಚ್ಚದ ಪೈಕಿ ಶೇ.70ರಷ್ಟನ್ನು ಕಾರ್ಡ್‌ದಾರರು ಪಾವತಿಸಬೇಕು.