ಆಲೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ವರದರಾಜ್ ಆಯ್ಕೆ
Nov 17 2024, 01:19 AM ISTಆಲೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ವರದರಾಜ್ ಆಯ್ಕೆಯಾಗಿದ್ದು, ಇವರು 21 ಮತ ಗಳಿಸಿದರೆ ಇವರ ಪ್ರತಿಸ್ಪರ್ಧಿ ಶಿಕ್ಷಣ ಇಲಾಖೆಯ ರವಿ ಒಂಭತ್ತು ಮತ ಗಳಿಸಿ ಪರಾಜಿತರಾದರು. ನೌಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ಎಲ್ಲಾ ಇಲಾಖೆಯಿಂದ ಅವಿರೋಧ ಆಯ್ಕೆಯಾದರೆ, ಶಿಕ್ಷಣ ಇಲಾಖೆ ಎಲ್ಲಿ ತೀವ್ರ ಪೈಪೋಟಿ ಏರ್ಪಟ್ಟು ಚುನಾವಣೆ ನಡೆದ ಪರಿಣಾಮ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದರು.