ಮಂಗಳೂರು ಸರ್ಕಾರಿ ಶಾಲೆಯಲ್ಲಿ ಬಿಹಾರಿ ಮಕ್ಕಳ ಕನ್ನಡ ಕಲಿಕೆ!
Sep 24 2024, 02:01 AM ISTಕನ್ನಡ ಮಾಧ್ಯಮ ಶಾಲೆಯಲ್ಲಿ ಬಿಹಾರದ ಮಕ್ಕಳು ಕನ್ನಡ ಕಲಿಯುವ ಅಪರೂಪದ ವಿದ್ಯಮಾನ ಒಂದೆಡೆಯಾದರೆ, ಶಾಲೆಯ ಮೆಟ್ಟಿಲನ್ನೇ ಏರದೇ ಅನಕ್ಷರಸ್ಥರಾಗಿಯೇ ಬೆಳೆಯಬೇಕಿದ್ದ ಮಕ್ಕಳು ಅಕ್ಷರ ಕಲಿಯುವ ಶಿಕ್ಷಣ ಕ್ರಾಂತಿಯ ಹೊಸ ಅಧ್ಯಾಯಕ್ಕೆ ಮಂಗಳೂರಿನ ಶಾಲೆಯೊಂದು ಸಾಕ್ಷಿಯಾಗಿದೆ. ಶಿಕ್ಷಕಿಯೊಬ್ಬರ ವಿಶೇಷ ಪ್ರಯತ್ನದ ಫಲವಾಗಿ 53 ಬಿಹಾರಿ ಮಕ್ಕಳು ಅಕ್ಷರ ಕಲಿಕೆ ಆರಂಭಿಸಿದ್ದಾರೆ.