ಚಿನ್ನಹಗರಿ ನದಿಗೆ ಸೇತುವೆ ನಿರ್ಮಾಣ ವಿಳಂಬವೇಕೆ ?
Oct 27 2024, 02:07 AM ISTಎತ್ತಿನ ಗಾಡಿ ಮುಗುಚಿ 21 ಜನರ ಸಾವಿಗೆ ಕಾರಣವಾಗಿದ್ದ ತಾಲೂಕಿನ ಮಾಚೇನಹಳ್ಳಿ ಚಿನ್ನಹಗರಿ ನದಿಯ ದುರ್ಘಟನೆ ನಡೆದು ಎರಡು ದಶಕದ ಸನಿಹಕ್ಕೆ ಬಂದರೂ, ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಇಂದಿಗೂ ಸೇತುವೆ ನಿರ್ಮಾಣಕ್ಕೆ ಮುಂದಾಗದಿರುವುದು ಭರವಸೆ ಹೊತ್ತಿದ್ದ ಜನರ ಕನಸು ನದಿಯ ಮರಳಲ್ಲಿ ಹೂತು ಹೋಗುವಂತಾಗಿದೆ.