ಮಳೆ ಆರ್ಭಟಕ್ಕೆ ಉಕ್ಕಿ ಹರಿದ ನೀರು: ಮಾದಿಹಳ್ಳಿ ಸೇತುವೆ ಮುಳುಗಡೆ
Oct 22 2024, 12:00 AM ISTಮಾದಿಹಳ್ಳಿಯ ಸೇತುವೆ ಹಾಳಾಗಿ ಮೂರ್ನಾಲ್ಕು ವರ್ಷಗಳಾಗಿವೆ. ಜನಪ್ರತಿನಿಧಿಗಳು ಇತ್ತ ಗಮನ ಹರಿಸದ ಕಾರಣ ಗ್ರಾಮಸ್ಥರು, ಸದಸ್ಯ ಶ್ರೀಧರ್ ಸಹಕಾರದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡು ಓಡಾಡುತ್ತಿದ್ದರು. ಮಳೆ ಆರ್ಭಟಕ್ಕೆ ಉಕ್ಕಿ ಹರಿದ ನೀರಿನಿಂದ ಸೇತುವೆ ಕೊಚ್ಚಿ ಹೋಗಿದೆ. ದೊಡ್ಡ ಪ್ರಮಾಣದಲ್ಲಿ ನೀರಿನ ಕೊರಕಲು ಸೇತುವೆ ಬಳಿ ಮೂಡಿದ್ದು, ಬೇರೆ ಸ್ಥಳಗಳಿಗೆ ಗ್ರಾಮಸ್ಥರು ತೆರಳಲಾಗದೆ ಜಲದಿಗ್ಬಂಧನ ವಿಧಿಸಿದೆ.