156 ಚೀಲ, ಹಲವು ಕಪಾಟುಗಳಲ್ಲಿ ತುಂಬಿಟ್ಟಿದ್ದ ಹಣ ವಶ ಜಾರ್ಖಂಡ್ನ ಕಾಂಗ್ರೆಸ್ ಸಂಸದನ ಬಳಿ ₹220 ಕೋಟಿ ಕ್ಯಾಶ್ ಪತ್ತೆ!
Dec 09 2023, 01:15 AM ISTಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಒಡಿಶಾದಲ್ಲಿ ಬೃಹತ್ ಕಾರ್ಯಾಚರಣೆ. ರಾಜ್ಯಸಭಾ ಸದಸ್ಯ, ಲಿಕ್ಕರ್ ಉದ್ಯಮಿ ಧೀರಜ್ ಸಾಹು ಸಂಪತ್ತು ಅನಾವರಣ. ಹಣ ಎಣಿಸಲು 30 ಜನ, 8 ಯಂತ್ರ ಬಳಕೆ. ಜಪ್ತಿಯಾದ ಹಣ ₹400 ಕೋಟಿ?. ರಾಜ್ಯಸಭಾ ಸದಸ್ಯ ಧೀರಜ್ ಸಾಹುಗೆ ಸೇರಿದ ಒಡಿಶಾದ ವಿವಿಧೆಡೆ ತೆರಿಗೆ ದಾಳಿ. ಬುಧವಾರ ಆರಂಭವಾದ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಕೆ. ಈವರೆಗೆ 220 ಕೋಟಿ ರು. ನಗದು ಪತ್ತೆ. ಇನ್ನೂ ನಡೆಯುತ್ತಿದೆ ಎಣಿಕೆ ಕಾರ್ಯ. ಧೀರಜ್ ಬಳಿ ಪತ್ತೆಯಾದ ಹಣದ ಮೌಲ್ಯ 400 ಕೋಟಿ ರು. ಇರುವ ಅಂದಾಜು. ಒಡಿಶಾದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಅತಿದೊಡ್ಡ ಕಾರ್ಯಾಚರಣೆ ಇದು. ಬಲ್ಡಿಯಾ ಸಾಹು ಎಂಬ ಮದ್ಯ ತಯಾರಿಕೆ ಹಾಗೂ ಮಾರಾಟ ಸಂಸ್ಥೆಯ ಮೇಲೂ ದಾಳಿ. ಇದು ಒಡಿಶಾದ ಅತಿದೊಡ್ಡ ಮದ್ಯ ತಯಾರಿಕೆ, ಮಾರಾಟ ಕಂಪನಿ. ಸಾಹು ಒಡೆತನದ್ದು.