ದೇಗುಲ ಬದಲಾಗಿ ಶಾಲೆಗೆ ಹಣ ಖರ್ಚು ಮಾಡಿದರೆ ಸಾರ್ಥಕ: ಗುರುಮಹಾಂತ ಮಹಾಸ್ವಾಮೀಜಿ
Jan 29 2024, 01:32 AM ISTಇಳಕಲ್ಲ: ಗುಡಿ-ಗುಂಡಾರಕ್ಕೆ ಸುಣ್ಣ ಬಣ್ಣ ಬಳೆದು ಸಿಂಗರಿಸುವ ಬದಲು, ಜೀವಂತ ದೇವರು ಇರುವ ಶಾಲೆಗಳಿಗೆ ಖರ್ಚು ಮಾಡಿ ಅಭಿವೃದ್ಧಿ ಮಾಡಿದರೆ ಸಾರ್ಥಕವಾಗುತ್ತದೆ ಎಂದು ಚಿತ್ತರಗಿ-ಇಳಕಲ್ಲ ಸಂಸ್ಥಾನ ಮಠದ ಪೀಠಾಧಿಪತಿ ಗುರುಮಹಾಂತ ಮಹಾಸ್ವಾಮೀಜಿ ಹೇಳಿದರು. ನಗರದ ಬಸವೇಶ್ವರ ಶಿಕ್ಷಣ ಸಮಿತಿ ನಡೆಸುತ್ತಿರುವ ಬಸವೇಶ್ವರ ಕನ್ನಡ ಮಾಧ್ಯಮ ಶಿಶುವಿಹಾರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ೨೯ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಸವೇಶ್ವರ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟ ಶ್ರೇಷ್ಠವಾದದ್ದು ಎಂದರು.