ವ್ಹೀಲಿಂಗ್ ಮಾಡಲು ಹೋಗಿ ಕೈ, ಕಾಲು ಮುರಿದುಕೊಂಡ ಯುವಕರು - ಒಬ್ಬನ ತಲೆಗೆ ತೀವ್ರ ಗಾಯವ್ಹೀಲಿಂಗ್ ಮಾಡಲು ಹೋಗಿ ಮೂವರು ಯುವಕರ ಪೈಕಿ ಇಬ್ಬರಿಗೆ ಕೈ-ಕಾಲು ಮುರಿದಿದ್ದು, ಒಬ್ಬನ ತಲೆಗೆ ತೀವ್ರ ಗಾಯಗಳಾಗಿರುವ ಘಟನೆ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಜರುಗಿದೆ. ಮದ್ದೂರು ಪಟ್ಟಣದ ಶಿವಪುರ ನಿವಾಸಿಗಳಾದ ಪ್ರಜ್ವಲ್, ಶಿವರಾಜ್ ಹಾಗೂ ಕುಮಾರ್ ಮೂವರು ಯುವಕರು.