ಸೆನ್ಸೆಕ್ಸ್ 1,064, ನಿಫ್ಟಿ 322 ಅಂಕ ಕುಸಿತ: ₹4.92 ಲಕ್ಷ ಕೋಟಿ ನಷ್ಟ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್, ನಿಫ್ಟಿ ಸತತ ಎರಡನೇ ದಿನವೂ ಕುಸಿತ ಕಂಡಿದ್ದು, ಶೇ.1 ಕ್ಕಿಂತ ಜಾಸ್ತಿ ಕುಸಿತವಾಗಿದೆ. ಸೆನ್ಸೆಕ್ಸ್ ಮಂಗಳವಾರ 1,064.ಅಂಕಗಳ ಕುಸಿತದೊಂದಿಗೆ 80,612ರಲ್ಲಿ ಅಂತ್ಯಗೊಂಡಿತು. ಇದೇ ವೇಳೆ ನಿಫ್ಟಿ 332. 25 ಅಂಕ ಕುಸಿದು 24,336ರಲ್ಲಿ ಮುಕ್ತಾಯವಾಯಿತು. ಇದರಿಂದ ಹೂಡಿಕೆದಾರರ ಸಂಪತ್ತಿನಲ್ಲಿ ಒಂದೇ ದಿನ ಬರೋಬ್ಬರಿ 4.92 ಲಕ್ಷ ಕೋಟಿ ನಷ್ಟವಾಗಿದೆ.