ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ವಿರುದ್ಧ ಜಗ್ಮೀತ್ ಬಂಡಾಯ : ಅವಿಶ್ವಾಸ ನಿರ್ಣಯ ಪರ ಮತ ಘೋಷಣೆಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರಿಗೆ ಸಂಕಷ್ಟ ಎದುರಾಗಿದ್ದು, ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆದರೆ ಅದರ ಪರ ಮತ ಹಾಕುತ್ತೇವೆ ಎಂದು ಮಿತ್ರಪಕ್ಷ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್ಡಿಪಿ) ನಾಯಕ ಜಗ್ಮೀತ್ ಸಿಂಗ್ ಶುಕ್ರವಾರ ಘೋಷಿಸಿದ್ದಾರೆ.