ಮಹಾಯುತಿ ಕೂಟ ಸರ್ಕಾರ, ಶನಿವಾರ ಖಾತೆ ಹಂಚಿಕೆ ಮಾಡಿದೆ. ಅದರನ್ವಯ ಮಹತ್ವದ ಗೃಹ ಖಾತೆಯನ್ನು ಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಜತೆಗೆ, ಶಕ್ತಿ, ಕಾನೂನು, ನ್ಯಾಯಾಂಗ, ಸಾಮಾನ್ಯ ಆಡಳಿತ, ಮಾಹಿತಿ ಮತ್ತು ಪ್ರಚಾರ ಇಲಾಖೆಗಳು ಕೂಡ ಸಿಎಂ ಪಾಲಾಗಿದೆ.
ಚುನಾವಣೆ ದಾಖಲೆಗಳನ್ನು ಪಡೆಯಲು ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟಿದ್ದ ನಿಯಮವೊಂದಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ದಾಖಲೆಗಳು ಸುಲಭವಾಗಿ ಸಾರ್ವಜನಿಕರಿಗೆ ಲಭಿಸದಂತೆ ತಡೆದಿದೆ.
ಭಾರತದಲ್ಲಿ ಅರಣ್ಯ ಹಾಗೂ ಟ್ರೀ ಕವರ್ ಪ್ರಮಾಣವು 2021ರಿಂದ 2023ರ ಅವಧಿಯಲ್ಲಿ 1445 ಚದರ ಕಿ.ಮೀ.ನಷ್ಟು ವೃದ್ಧಿಸಿದೆ. ಶೇ. 25.17 ಪ್ರದೇಶದಲ್ಲೀಗ ಅರಣ್ಯವಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆಯೊಂದು ಭಾರತದೊಳಗೆ ನುಗ್ಗಿ ಹಿಂದೂ ನಾಯಕರ ಹತ್ಯೆ ಮತ್ತು ರಸ್ತೆ ಕಾರಿಡಾರ್ ಸ್ಫೋಟದ ಮೂಲಕ ಆರ್ಥಿಕ ವಿನಾಶಕ್ಕೆ ಸಂಚು ರೂಪಿಸಿದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.