ಅಯ್ಯಪ್ಪ ಯಾತ್ರೆಗೆ ಬರುವವರಿಗೆ ಸ್ಥಳದಲ್ಲೇ ಟಿಕೆಟ್ ನೀಡುವ ‘ಸ್ಪಾಟ್ ಬುಕಿಂಗ್’ಗೆ ಅವಕಾಶ ನೀಡುವುದಿಲ್ಲ. ಮಂಡಲಪೂಜೆ ಹಾಗೂ ಮಕರವಿಳಕ್ಕು ಸಮಯದಲ್ಲಿ ದರ್ಶನ ಪಡೆಯಲು ಬರುವ ಎಲ್ಲರಿಗೂ ದರ್ಶನಾವಕಾಶ ನೀಡಲಾಗುವುದು ಎಂದು ಕೇರಳ ದೇಗುಲ ಸಚಿವ ವಿ.ಎನ್.ವಾಸವನ್ ಅವರು ಭಾನುವಾರ ಸ್ಪಷ್ಪಪಡಿಸಿದ್ದಾರೆ.
ಜಾಗತಿಕ ಹಸಿವು ಸೂಚ್ಯಂಕದಲ್ಲಿ 127 ದೇಶಗಳ ಪೈಕಿ ಭಾರತದ ಆತಂಕಕಾರಿ ಸ್ಥಾನದಲ್ಲಿದೆ. ದೇಶದಲ್ಲಿ ಶೇ.14ರಷ್ಟು ಜನರು ಅಪೌಷ್ಟಿಕತೆ ಹೊಂದಿದ್ದಾರೆ ಮತ್ತು ಶಿಶು ಮರಣ ಪ್ರಮಾಣ ಗಂಭೀರವಾಗಿದೆ
ಈ ಹಿಂದೆ ಸಲ್ಮಾನ್ ಖಾನ್-ಶಾರುಖ್ ಖಾನ್ ಜಗಳ ಬಗೆಹರಿಸಿದ್ದ ಸಲ್ಮಾನ್ ಆಪ್ತ, ಮಾಜಿ ಸಚಿವ ಹಾಗೂ ಎನ್ಸಿಪಿ (ಅಜಿತ್ ಬಣ) ನಾಯಕ ಬಾಬಾ ಸಿದ್ದಿಕಿ ಅವರನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಬಳಿಕ ಬಾಂಗ್ಲಾದೇಶದಲ್ಲಿ ಆರಂಭವಾಗಿರುವ ಹಿಂದೂಗಳ ಮೇಲೆ ದಾಳಿಗಳು, ದುರ್ಗಾಪೂಜೆ ವೇಳೆ ಮತ್ತಷ್ಟು ತೀವ್ರಗೊಂಡಂತಿದೆ. ಇದೀಗ ಬಾಂಗ್ಲಾದೇಶದ ಕಾಳಿ ಮಂದಿರವೊಂದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಚಿನ್ನ ಲೇಪಿತ ಬೆಳ್ಳಿಯ ಕಿರೀಟವನ್ನು ಕಳವು ಮಾಡಲಾಗಿದೆ.