ಕರ್ನಾಟಕದ ಕಾಫಿ, ಚಹಾ ತೋಟಗಳಲ್ಲಿ ಟಾಟಾ ಘಮಪ್ರಸಿದ್ಧ ಟಾಟಾ ಸಂಸ್ಥೆ ಕೊಡಗು ಸೇರಿ ಹಾಸನ, ಚಿಕ್ಕಮಗಳೂರು, ಪಕ್ಕದ ರಾಜ್ಯ ತಮಿಳುನಾಡು ಹಾಗೂ ಕೇರಳದಲ್ಲಿ ಸುಮಾರು 33 ಸಾವಿರ ಎಕರೆ ಕೃಷಿ ಭೂಮಿ ಹೊಂದಿದ್ದು, ಇಲ್ಲಿ ಕಾಫಿ ಹಾಗೂ ಚಹಾ ಬೆಳೆಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಸಾವಿರಾರು ಮಂದಿ ಕೆಲಸ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.