ಕಾಂಗ್ರೆಸ್ ಪಕ್ಷವು ಮಿತ್ರ ಪಕ್ಷಗಳನ್ನು ನಿರ್ಲಕ್ಷಿಸಿ ಹರ್ಯಾಣದಲ್ಲಿ ಸೋಲುತ್ತಿದ್ದಂತೆಯೇ ಇಂಡಿಯಾ ಕೂಟದ ಹಲವು ಪಕ್ಷಗಳು ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಪಕ್ಷದ ಮೇಲೆ ತಿರುಗಿಬಿದ್ದಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬುಧವಾರ ತನ್ನ ದ್ವೈಮಾಸಿಕ ಸಾಲ ನೀತಿ ಪ್ರಕಟಿಸಿದ್ದು, ರೆಪೋ ದರವನ್ನು ಶೇ.6.5ರಲ್ಲೇ ಕಾಯ್ದುಕೊಳ್ಳಲು ನಿರ್ಧರಿಸಿದೆ. ಹೀಗಾಗಿ ಗೃಹ, ವಾಹನ ಸೇರಿದಂತೆ ಇತರೆ ಸಾಲದ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರ ಹಾಲಿ ದರದಲ್ಲೇ ಮುಂದುವರೆಯಲಿದೆ.
ಗುಣಮಟ್ಟದ, ಅಗ್ಗದ ದರದ ಸ್ವದೇಶಿ ಕಾರು ನ್ಯಾನೋ ರೂಪದಲ್ಲಿ ಅನಾವರಣ ಮಧ್ಯಮ ವರ್ಗದವರೇ ಹೆಚ್ಚಿರುವ ಭಾರತದಲ್ಲಿ, ಅವರಿಗೆ ಕೈಗೆಟುಕುವ ದರದಲ್ಲಿ ಕಾರ್ ತಯಾರಿಸುವ ಕನಸು ಕಂಡವರು ಉದ್ಯಮಿ ರತನ್ ಟಾಟಾ.
ಲಾಭಗಳಿಸುವ ಉದ್ದೇಶದೊಂದಿಗೆ ಉದ್ಯಮಗಳು ಆರಂಭವಾಗುತ್ತವಾದರೂ, ಅವು ಒಂದು ಹಂತ ತಲುಪಿದ ಬಳಿಕ ಉದ್ಯಮಿಗಳು ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡುತ್ತಾರೆ. ಇಂತಹವರಲ್ಲಿ ರತನ್ ಟಾಟಾ ಪ್ರಮುಖ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತಾರೆ
ರತನ್ ಟಾಟಾ ತಮ್ಮ ಕನಸಿನ ಟಾಟಾ ನ್ಯಾನೋ ಕಾರು ಘಟಕವನ್ನು ಆರಂಭಿಸಲು ಮೊದಲಿಗೆ ಪಶ್ಚಿಮ ಬಂಗಾಳದ ಸಿಂಗೂರು ಗ್ರಾಮ ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ಅಂದಿನ ಸಿಪಿಎಂ ಸರ್ಕಾರ ಭೂಮಿ ನೀಡಿತ್ತು. ಅದರಂತೆ ಘಟಕ ನಿರ್ಮಾಣದ ಕಾಮಗಾರಿಯೂ ಆರಂಭವಾಗಿತ್ತು.
ದೇಶದ ಮನೆಮನೆಗಳಲ್ಲೂ ನಿತ್ಯವೂ ಟಾಟಾ ಸಮೂಹದ ಉತ್ಪನ್ನಗಳ ಬಳಕೆ ಮಾಡಲಾಗುತ್ತದೆ. ಗುಣಮಟ್ಟ, ವಿಶ್ವಾಸಾರ್ಹತೆ ಉಳಿಸಿಕೊಂಡ 156 ವರ್ಷ ಇತಿಹಾಸ ಕಂಪನಿ ಹೊಂದಿದೆ.
ದಶಕಗಳ ಕಾಲ ಟಾಟಾ ಸಮೂಹ ಮುನ್ನಡೆಸಿದ ರತನ್ ಟಾಟಾ ಜನ ಸಾಮಾನ್ಯರೊಂದಿಗೆ ನೇರವಾಗಿ ಬೆರೆತಿದ್ದು ಇಲ್ಲವೇ ಇಲ್ಲವೆನ್ನುವಷ್ಟು ತೀರಾ ಕಡಿಮೆ. ಕಂಪನಿಯ ಕೆಲಸಗಳಲ್ಲಿ ಎಲ್ಲರೊಂದಿಗೂ ಜೊತೆಗೂಡುವುದನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ಮೌನಿ. ಅವರದ್ದು ಏನಿದ್ದರೂ ಕೆಲಸದ ಮೂಲಕವೇ ಮಾತು.
ರತನ್ ಟಾಟಾ ಅವರು ಟಾಟಾ ಸಮೂಹದ ಸಂಸ್ಥಾಪಕ ಜೆಮ್ಶೆಡ್ಜೀ ಟಾಟಾ ಅವರ ಮರಿ ಮೊಮ್ಮಗ. 1937ರಲ್ಲಿ ಮುಂಬೈನಲ್ಲಿ ಅವರು ಜನಿಸಿದರು.
ದಿವಂಗತ ರತನ್ಜಿ ಟಾಟಾ ಅವರ ಅಂತಿಮ ಸಂಸ್ಕಾರವನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಘೋಷಿಸಿದ್ದಾರೆ. ಆದರೆ ಅಂತಿಮ ಸಂಸ್ಕಾರದ ದಿನಾಂಕದ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.
ಭಾರತದ ಅತಿದೊಡ್ಡ ಸಮೂಹ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಹಾಗೂ ದೇಶ-ವಿದೇಶಗಳಲ್ಲಿ ಮನೆಮಾತಾಗಿದ್ದ ರತನ್ ಟಾಟಾ (86) ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ.