ಟಿಪ್ಪು ಜಯಂತಿ ಆಚರಣೆಗೆ ನಿಷೇಧವೇನಾದರೂ ಇದೆಯೇ ಎಂದು ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದ ಪ್ರಸಂಗ ಗುರುವಾರ ನಡೆದಿದೆ.
‘ಆತ್ಮಹತ್ಯೆಗೆ ಪ್ರಚೋದನೆ ನೀಡುವ ಅಪರಾಧಕ್ಕೆ ಯಾರನ್ನಾದರೂ ತಪ್ಪಿತಸ್ಥ ಎಂದು ಘೋಷಿಸಲು ಕೇವಲ ಕಿರುಕುಳ ನೀಡಿರುವುದು ಸಾಕಾಗುವುದಿಲ್ಲ. ಇದಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಚೋದನೆಯ ಸ್ಪಷ್ಟ ಪುರಾವೆಗಳು ಇರಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಟೆಕ್ಕಿ ಅತುಲ್ ಸುಬಾಷ್ ಆತ್ಮಹತ್ಯೆ ಪ್ರಕರದ ಬಗ್ಗೆ ಕಂಗನಾ ರಾಣಾವತ್ ಪ್ರತಿಕ್ರಿಯಿಸಿದ್ದು, ‘ಪತ್ನಿಯಿಂದ ಕಿರುಕುಳಕ್ಕೆ ಒಳಗಾದ ಬಗ್ಗೆ ಟೆಕ್ಕಿ ಮಾಡಿರುವ ವಿಡಿಯೋ ಹೃದಯ ವಿದ್ರಾಕವಾಗಿದೆ. ಆತನ ಆರ್ಥಿಕ ಸಾಮರ್ಥ್ಯವನ್ನು ಮೀರಿ ಕೋಟ್ಯಂತರ ಹಣವನ್ನು ವಸೂಲಿ ಮಾಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಖ್ಯಾತ ನಟ ರಾಜ್ ಕಪೂರ್ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಡಿ.13ರಿಂದ ಮುಂಬೈನಲ್ಲಿ ಆರಂಭವಾಗುವ ರಾಜ್ ಕಪೂರ್ ಚಿತ್ರೋತ್ಸವಕ್ಕೆ ಕಪೂರ್ ಕುಟುಂಬದವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದರು.