ರೈತರ ಆದಾಯ ಹೆಚ್ಚಳದ ಪ್ರಮುಖ ಉದ್ದೇಶವನ್ನಿಟ್ಟುಕೊಂಡು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸೋಮವಾರ 14 ಸಾವಿರ ಕೋಟಿ ರು. ವೆಚ್ಚದ 7 ಬೃಹತ್ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ.
‘ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಬಡವರ ಪರ ಕೆಲಸ ಮುಂದುವರೆಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ಬಹುನಿರೀಕ್ಷಿತ ‘ವಂದೇ ಭಾರತ್’ ಸ್ಲೀಪರ್ ರೈಲು ಭಾನುವಾರ ಬೆಂಗಳೂರಿನಲ್ಲಿ ಅನಾವರಣಗೊಂಡಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇದನ್ನು ಅನಾವರಣಗೊಳಿಸಿದರು
ಕೇರಳ ಚಿತ್ರರಂಗವನ್ನು ತಲ್ಲಣಗೊಳಿಸಿರುವ ಸೆಕ್ಸ್ ಹಗರಣ, ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಕೇರಳ ಕಾಂಗ್ರೆಸ್ ಘಟಕದಲ್ಲೂ ದೊಡ್ಡದಾಗಿಯೇ ನಡೆಯುತ್ತಿದೆ ಎಂದು ಸ್ವತಃ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಸದಸ್ಯೆ, ಪಕ್ಷದ ಹಿರಿಯ ನಾಯಕಿ ಸಿಮಿ ರೋಸ್ ಬೆಲ್ ಜಾನ್ ಗಂಭೀರ ಆರೋಪ ಮಾಡಿದ್ದಾರೆ.
ನಿಜ ಜೀವನದ ಏರ್ ಇಂಡಿಯಾ ವಿಮಾನ ಅಪಹರಣವನ್ನು ಆಧರಿಸಿದ ನೆಟ್ಫ್ಲಿಕ್ಸ್ನ 'ಐಸಿ 814' ಚಿತ್ರವು ಉಗ್ರರ ಹೆಸರುಗಳನ್ನು ಬದಲಾಯಿಸಿರುವುದಕ್ಕೆ ಟೀಕೆಗೆ ಗುರಿಯಾಗಿದೆ.