ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ 3ರ ಮೈತೇಯಿ ಬಾಲಕನ ತಲೆಗೆ ಗುಂಡಿಕ್ಕಿ ಕಣ್ಣು ಕಿತ್ತ ಪಾಪಿಗಳು!ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರರಿಂದ ಹತ್ಯೆಯಾದ 6 ಜನರ ಪೈಕಿ ಮೂವರ ಶವ ಪರೀಕ್ಷೆಯ ವರದಿಗಳು ಬಂದಿದ್ದು, ಅದು ಕುಕಿ ಉಗ್ರರ ಭೀಕರತೆಗೆ ಸಾಕ್ಷಿಯಾಗಿದೆ. ಈ ವರದಿ ಪ್ರಕಾರ ಪುಟ್ಟ ಮಗು, ತಾಯಿ, ಅಜ್ಜಿಯ ದೇಹದಲ್ಲಿ ಗುಂಡೇಟಿನಿಂದ ಆಳವಾದ ಗಾಯಗಳು ಉಂಟಾಗಿರುವುದು ದೃಢವಾಗಿದೆ.