ಸೌಂದರ್ಯ ಸ್ಪರ್ಧೆಯಾದ ಮಿಸ್ ಇಂಡಿಯಾ ವಿಚಾರ - ರಾಹುಲ್ ಗಾಂಧಿಯದು ‘ಬಾಲ ಬುದ್ಧಿ’: ಕೇಂದ್ರ ಸಚಿವ ರಿಜಿಜು ವ್ಯಂಗ್ಯ ಸೌಂದರ್ಯ ಸ್ಪರ್ಧೆಯಾದ ಮಿಸ್ ಇಂಡಿಯಾ ವಿಜೇತರ ಪಟ್ಟಿಯಲ್ಲಿ ಒಬ್ಬ ದಲಿತ ಅಥವಾ ಆದಿವಾಸಿ ಮಹಿಳೆಯ ಹೆಸರಿಲ್ಲ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಟೀಕಿಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಇಂತಹ ಯೋಚನೆಗಳು ಕೇವಲ ‘ಬಾಲ ಬುದ್ಧಿ’ ಉಳ್ಳವರಿಗೆ ಬರಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.