ಬ್ಯಾಲೆಟ್ ಪೇಪರ್ ಮತ ಕೋರಿದವರಿಗೆ ಸುಪ್ರೀಂ ತರಾಟೆ ಹಾಲಿ ದೇಶವ್ಯಾಪಿ ಚುನಾವಣೆಗಳಿಗೆ ಬಳಸುತ್ತಿರುವ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ರದ್ದುಗೊಳಿಸಿ, ಹಿಂದಿನ ಬ್ಯಾಲೆಟ್ ಪೇಪರ್ ವ್ಯವಸ್ಥೆ ಜಾರಿಗೆ ಕೋರಿದ್ದ ಅರ್ಜಿದಾರರ ವಿರುದ್ಧ ಕಿಡಿಕಾರಿರುವ ಸುಪ್ರೀಂಕೋರ್ಟ್, ಹಿಂದೆಲ್ಲಾ ಮತಗಟ್ಟೆಗಳನ್ನು ವಶಪಡಿಸಿಕೊಂಡು ಚುನಾವಣಾ ಫಲಿತಾಂಶವನ್ನೇ ಬದಲಾಯಿಸಿದ್ದು ಮರೆತು ಹೋಯಿತೇ ಎಂದು ಪ್ರಶ್ನಿಸಿದೆ.