ಬರೀ 24 ಜನ ಸೇರಿದ ಸಭೇಲಿ 12 ಕೆಜಿ ಡ್ರೈ ಫ್ರೂಟ್ಸ್, 9 ಕೆ.ಜಿ. ಹಣ್ಣು, 30 ಕೆಜಿ ಸ್ನ್ಯಾಕ್ಸ್ ಗುಳುಂ !ಭಾರತೀಯರಿಗೆ ಬಾಯಿರುಚಿ ಹೆಚ್ಚು, ಹೌದು. ಆದರೆ ಈ ಮಟ್ಟಿಗೆ! ಮಧ್ಯಪ್ರದೇಶದ ಭದ್ವಾಹಿ ಹಳ್ಳಿಯಲ್ಲಿ ಜಲ ಸಂರಕ್ಷಣೆ ಕುರಿತಾದ ಪಂಚಾಯತ್ ಸಭೆಯೊಂದರಲ್ಲಿ ತರಿಸಲಾದ 12 ಕೆ.ಜಿ. ಒಣಹಣ್ಣು, 9 ಕೆ.ಜಿ. ಹಣ್ಣು, ಮತ್ತು 30 ಕೆ.ಜಿ. ಕುರುಕುಲು ತಿಂಡಿಯಷ್ಟನ್ನೂ ಬರೀ 24 ಜನ ಸೇರಿ ತಿಂದು ತೇಗಿದ ಘಟನೆ ನಡೆದಿದೆ.