ಧರ್ಮಗ್ರಂಥಗಳಿಗೆ ಹಾನಿ ಮಾಡುವವರ ವಿರುದ್ಧ ಅತ್ಯಂತ ಕಠಿಣ ಶಿಕ್ಷೆಗೆ ಅವಕಾಶ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲು ಪಂಜಾಬ್ನ ಆಮ್ಆದ್ಮಿ ಸರ್ಕಾರ ನಿರ್ಧರಿಸಿದೆ.
ಅಕ್ರಮ ಬೆಟ್ಟಿಂಗ್ ಆ್ಯಪ್ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ವಿಜಯ್ ದೇವರಕೊಂಡ, ನಟ ಪ್ರಕಾಶ್ ರಾಜ್, ನಟಿ ಪ್ರಣೀತಾ ಸುಭಾಷ್, ತೆಲುಗು ನಟರಾದ ರಾಣಾ ದಗ್ಗುಬಾಟಿ ಸೇರಿದಂತೆ 29 ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.
ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ(ಐಎಸ್ಎಸ್)ಗೆ ತೆರಳಿರುವ ಭಾರತೀಯ ಶುಭಾಂಶು ಶುಕ್ಲಾ ಸೇರಿ 4 ಗಗನಯಾತ್ರಿಗಳು ಜು.14ರಂದು ಭೂಮಿಗೆ ಮರಳುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಹಿತಿ ನೀಡಿದೆ.
ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಇದೀಗ ಕರ್ನಾಟಕದ ಶೆಟ್ಟಿ ಸಮುದಾಯ ಮತ್ತು ದಕ್ಷಿಣ ಭಾರತೀಯರ ವಿರುದ್ಧ ಕೀಳು ಹೇಳಿಕೆ ನೀಡಿದ್ದಾರೆ. ಶೆಟ್ಟಿಗಳಿಗೇಕೆ ಮುಂಬೈನಲ್ಲಿ ಆಹಾರ ಪೂರೈಸುವ ಗುತ್ತಿಗೆ ನೀಡುತ್ತೀರಿ. ಅದನ್ನು ಮರಾಠಿಗರಿಗೆ ನೀಡಿ ಎಂದು ಹೇಳಿದ್ದಾರೆ.