ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇದು ಅತ್ಯಂತ ಕೆಟ್ಟ ಹೇಳಿಕೆ. ಇದೇ ರೀತಿ ಜೆಲೆನ್ಸ್ಕಿ ನಿಲುವು ಮುಂದುವರಿಸಿದರೆ ಅಮೆರಿಕವು ಉಕ್ರೇನ್ಗೆ ಬೆಂಬಲ ಸ್ಥಗಿತ ಮಾಡಬೇಕಾದೀತು’ ಎಂದು ಎಚ್ಚರಿಸಿದ್ದಾರೆ.
ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯೊಬ್ಬರಿಗೆ ಗುಂಡುಹೊಡೆದು ಸಾಯಿಸುವ ಶಿಕ್ಷೆಗೆ ಜಾರಿಗೆ ಅಮೆರಿಕದಲ್ಲಿ ಸಿದ್ಧತೆ ನಡೆಸಲಾಗಿದೆ. 15 ವರ್ಷಗಳ ಬಳಿಕ ಅಮೆರಿಕದಲ್ಲಿ ಈ ಮಾದರಿಯಲ್ಲಿ ಶಿಕ್ಷೆ ಜಾರಿಗೊಳಿಸಲಾಗುತ್ತಿದೆ.
ನೆರೆಯ ಆಪ್ತ ದೇಶವಾದ ಭೂತಾನ್ಗೆ ರೈಲು ಸಂಪರ್ಕ ಕಲ್ಪಿಸಲು ಭಾರತ ಸರ್ಕಾರ ಮುಂದಾಗಿದೆ. ಈ ಯೋಜನೆ ಜಾರಿ ಬಳಿಕ ಪುಟ್ಟ ದೇಶ ಭೂತಾನ್ ಮೊದಲ ಬಾರಿಗೆ ರೈಲ್ವೆ ಸಂಪರ್ಕ ಪಡೆದ ಸಂಭ್ರಮಕ್ಕೆ ಪಾತ್ರವಾಗಲಿದೆ.
ಬದರಿನಾಥ ದೇಗುಲದಲ್ಲಿ ಶಂಖ ನಾದ ನಿಷೇಧಿಸಲಾಗಿದೆ. ಶಂಖ ನಾದವು ಕಂಪನ ಸೃಷ್ಟಿಸುವ ಕಾರಣ ಅದು ಹಿಮಕುಸಿತಕ್ಕೆ ಕಾರಣವಾಗುವ ಭೀತಿಯಿಂದ ದೇಗುಲದಲ್ಲಿ ಮತ್ತು ಬದರಿಪಟ್ಟಣದಲ್ಲಿ ಶಂಖ ಮೊಳಗಿಸುವುದನ್ನು ನಿಷೇಧಿಸಲಾಗಿದೆ.
ರಷ್ಯಾ ಜೊತೆಗಿನ ಕದನ ನಿಲ್ಲಿಸಲು ಉಕ್ರೇನ್ ಬೆದರಿಸುವ ಯತ್ನ ಫಲಕೊಡದೇ ಅಮೆರಿಕ ದೂರವಾದ ಬೆನ್ನಲ್ಲೇ, ಉಕ್ರೇನ್ ನೆರವಿಗೆ ಯುರೋಪಿಯನ್ ದೇಶಗಳು ಧಾವಿಸಿದೆ.