2070ನೇ ಇಸವಿಯ ಹೊತ್ತಿಗೆ ಶೂನ್ಯ ಮಾಲಿನ್ಯ (ನೆಟ್ ಝೀರೋ) ಸಾಧಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ 1 ಗಿಗಾವ್ಯಾಟ್ನಷ್ಟು ವಿದ್ಯುತ್ತನ್ನು ಕಡಲತೀರದಿಂದ ಉತ್ಪಾದಿಸಲು ಹೂಡಿಕೆ ಮಾಡಲಾಗುತ್ತಿದೆ.
ಆಹಾರ ಹಾಗೂ ಗೊಬ್ಬರ ಮೇಲೆ ನೀಡುವ ಸಹಾಯಧನದ ಪ್ರಮಾಣವನ್ನು ಕೊಂಚ ಇಳಿಕೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಘೋಷಿಸಿದ್ದ 1 ಕೋಟಿ ಮನೆಗಳಿಗೆ ಸೋಲಾರ್ ಛಾವಣಿ ಅಳವಡಿಸುವ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ಗೆ ಬಜೆಟ್ನಲ್ಲಿ ಬಂಪರ್ ಕೊಡುಗೆ ನೀಡಲಾಗಿದೆ.