ಸಂಸತ್ ದಾಳಿಯ ಕಿಂಗ್ಪಿನ್ ಮೈಸೂರಿನ ಮನೋರಂಜನ್! ಡಿ.13ರಂದು ಸಂಸತ್ ಭವನದ ಒಳಗೆ ‘ಹೊಗೆ ಬಾಂಬ್’ ಸಿಡಿಸಿ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಶುಕ್ರವಾರ ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ, ಇಡೀ ಕೃತ್ಯದ ಮಾಸ್ಟರ್ಮೈಂಡ್ ಮೈಸೂರು ಮೂಲದ ಮನೋರಂಜನ್ ಎಂಬುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.