ಬೀದಿ ನಾಟಕ ಮೂಲಕ ಮತದಾನ ಜಾಗೃತಿಬಾದಾಮಿ ತಾಲೂಕಿನ ಗೋವಿನಕೊಪ್ಪದ ಆದಿಶಕ್ತಿ ಸಂಸ್ಕೃತಿಕ ಜನಪದ ಮಹಿಳಾ ಕಲಾ ತಂಡದವರು ತೇರದಾಳ ಪಟ್ಟಣದ ಗುಡ್ಡಿ ಗಲ್ಲಿ, ದೇವರಾಜ ನಗರ, ದಾಸರ ಮಡ್ಡಿ, ಪೇಠಭಾಗ, ಪ್ರಭು ಮಹಾದ್ವಾರ ಬಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಮತದಾನ ಜಾಗೃತಿ ಮೂಡಿಸಿದರು.