ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ: ಬಸವರಾಜ ಖೋತಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಮಾತು ಅಲ್ಲ, ಅಂತಹ ಕಷ್ಟದ ಕಾಲದಲ್ಲಿ ಹಿರಿಯರು, ಗ್ರಾಮದ ಜನರ ಸಹಕಾರದಿಂದ ಕುಂದರಗಿ ಗ್ರಾಮದಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿರುವ ಸಂಸ್ಥೆಯನ್ನು ನಿರ್ಮಿಸಿ ಎಲ್ಲ ಮಕ್ಕಳಿಗೂ ಪಠ್ಯ ಮತ್ತು ಪಠ್ಯೇತರ ವಿಷಯಗಳು ಸಿಗುವಂತಹ ಸಂಸ್ಥೆ ಸಿದ್ಧಗೊಂಡಿದೆ ಎಂದು ರಾಮಲಿಂಗೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಬಸವರಾಜ ಖೋತ ತಿಳಿಸಿದರು.