ನೇತ್ರ ಚಿಕಿತ್ಸೆಯಲ್ಲಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಾಧನೆ: ಡಾ.ದೀಪಾ.ಎಸ್. ಮುಗಳಿಪಂಚ ಜ್ಞಾನೇಂದ್ರಿಯಗಳಲ್ಲಿ ದೃಷ್ಟಿ ಅತ್ಯಂತ ಪ್ರಮುಖ ಅಂಗ. ಈ ಸೂಕ್ಷ್ಮ ಅಂಗದ ತೊಂದರೆ, ದೃಷ್ಟಿ ಮಾಂದ್ಯತೆ ಕಾರಣಗಳಿಗೆ ಈಗ ನವೀನ ತಂತ್ರಜ್ಞಾನಗಳಿಂದ ಹಾಗೂ ಹೊಸ ಆವಿಷ್ಕಾರಗಳಿಂದ ಚಿಕಿತ್ಸೆ ಸಾಧ್ಯವಿದ್ದು, ನೇತ್ರಗಳಿಗೆ ಹೊಸ ಆಶಾದೀಪವಾಗಿ ಹೊಮ್ಮುತ್ತಿದೆ. ನೂತನ ತಂತ್ರಜ್ಞಾನ ಮೈಗೂಡಿಸಿಕೊಳ್ಳುತ್ತಾ ಚಿಕಿತ್ಸಾ ವಿಧಾನದಲ್ಲಿ ಮಾನವೀಯತೆ ಅಂಶವನ್ನು ಕೈ ಬಿಡದೆ ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಮುನ್ನಡೆದಿದೆ ಎಂದು ಡಾ.ದೀಪಾ.ಎಸ್. ಮುಗಳಿ ತಿಳಿಸಿದರು.