ಆಲಮಟ್ಟಿ ಜಲಾಶಯ 524.256 ಮೀಟರ್ ಎತ್ತರಿಸಲಿ: ಹಣಮಂತ ನಿರಾಣಿಹಲವು ವರ್ಷಗಳಿಂದ ನಿರಂತರವಾಗಿ ಆಲಮಟ್ಟಿ ಜಲಾಶಯ ಎತ್ತರಿಸುವ ಕುರಿತಾಗಿ ಹಲವು ಹೋರಾಟ, ಚರ್ಚೆಗಳು ನಡೆದಿದ್ದು, ಸದ್ಯ ಜಲಾಶಯದ ಎತ್ತರ 524.256 ಮೀಟರ್ ಎತ್ತರಿಸಬೇಕೆಂಬ ಉದ್ದೇಶವನ್ನು ಸರ್ಕಾರ ಹೊಂದಬೇಕು. ಈ ಎತ್ತರಕ್ಕೆ ಬೇಕಿರುವ ಎಲ್ಲ ಪೂರಕ ಕೆಲಸಗಳನ್ನು ಶೀಘ್ರಗತಿಯಲ್ಲಿ ಆರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಆಗ್ರಹಿಸಿದ್ದಾರೆ.