ಮಹಿಳೆ ಮಾನಸಿಕ, ದೈಹಿಕ, ಸಾಮಾಜಿಕವಾಗಿ ಸಬಲವಾಗಲಿ: ಡಾ.ಅನಂತಮತಿ ಯಂಡೊಳ್ಳಿಆರ್ಥಿಕ ಸ್ವಾವಲಂಬನೆ ಜೊತೆಗೆ ಮಹಿಳೆಯರು ದೈಹಿಕವಾಗಿ, ಸಾಮಾಜಿಕವಾಗಿ ಸಬಲರಾಗಿ ಕೌಟುಂಬಿಕ ಪ್ರಗತಿಯಲ್ಲಿ ತಮ್ಮದೆ ಆದ ಯೋಗದಾನ ನೀಡುವತ್ತ ಸಂಕಲ್ಪ ಹೊಂದಬೇಕು. ಬಹುಮುಖ್ಯವಾಗಿ ನಮ್ಮ ಮಕ್ಕಳು ಇಂದು ನಮ್ಮತನ ಕಳೆದುಕೊಳ್ಳುತ್ತಿರುವುದು ಕಳವಳಕಾರಿಯಾಗಿದ್ದು, ಅವರಿಗೆ ಸಂಸ್ಕೃತಿ, ಸಂಸ್ಕಾರ ನೀಡುವ ಗುರುತರ ಹೊಣೆಗಾರಿಕೆ ಪಾಲಕರ ಕರ್ತವ್ಯವಾಗಿದೆ ಎಂದು ರಬಕವಿಯ ಹೆಸರಾಂತ ಹೋಮಿಯೋಪಥಿ ತಜ್ಞೆ ಡಾ.ಅನಂತಮತಿ ಯಂಡೊಳ್ಳಿ ಕಿವಿಮಾತು ಹೇಳಿದರು.