ಒಬ್ಬ ಸಿಎಂ ಇದ್ದಾಗ ಇನ್ನೊಬ್ಬ ಸಿಎಂ ಚರ್ಚೆ ಅನಗತ್ಯ: ಸಚಿವ ಗುಂಡೂರಾವ್ಈಗ ಒಬ್ಬ ಸಿಎಂ ಇರೋವಾಗ ಇನ್ನೊಬ್ಬ ಸಿಎಂ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಇವೆಲ್ಲ ಗುಸುಗುಸು ಸುದ್ದಿಗಳು ಇದ್ದೇ ಇರ್ತಾವೆ. ಇನ್ನೊಬ್ಬ ಸಿಎಂ ಬೇಕು, ಇರೋ ಸಿಎಂ 5 ವರ್ಷ ಇರುತ್ತಾರೆ ಅನ್ನೋ ವಿಷಯ ಬೇಕಾಗಿಲ್ಲ. ಮುಂದುವರೆಯೋದು, ಬದಲಾವಣೆ ಆಗೋದು ಎನ್ನುವ ಮಾತು ಕೂಡ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.