ಪಹಲ್ಗಾಂ ಘಟನೆ ದೇಶದ ಸಂಸ್ಕೃತಿ ಮೇಲಿನ ದಾಳಿ: ಕಾರಜೋಳಪಹಲ್ಗಾಂನಲ್ಲಿ ಉಗ್ರರು ದಾಳಿ ನಡೆಸಿ 26 ಜನ ಅಮಾಯಕರನ್ನು ಹತ್ಯೆ ಮಾಡಿದ್ದು, ಈ ದೇಶದ ಸಂಸ್ಕೃತಿ ಮೇಲೆ ಮಾಡಿದ ದಾಳಿಯಾಗಿದೆ. ಜಾತಿ ಧರ್ಮದ ಹೆಸರಿನಲ್ಲಿ ಬೇರೆಯವರಿಗೆ ಹಿಂಸೆ, ಕೊಲೆ, ಸುಲಿಗೆ ಮಾಡುವುದು ನಮ್ಮ ದೇಶದ ಸಂಸ್ಕೃತಿ ಅಲ್ಲ. ಈ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಎಲ್ಲ ಧರ್ಮದವರಿಗೆ ಸಮಾನ ಅವಕಾಶ ಇದೆ ಎಂದು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಹೇಳಿದರು.