ಜಗಜ್ಯೋತಿ ಬಸವಣ್ಣ ಜ್ಞಾನದ ಮಹಾಸಾಗ: ಗುರುಸಿದ್ದೇಶ್ವರ ಶ್ರೀಪ್ರಜೆಗಳೇ ಪ್ರಭುಗಳೆಂಬ ಕಲ್ಪನೆಯೇ ಇರದಿದ್ದ ಸಮಯದಲ್ಲಿ ಕಲ್ಯಾಣದಲ್ಲಿ ಅನುಭವ ಮಂಟಪ ಎಂಬ ಜನ ಸಂಸತ್ತು ಜಾರಿಗೊಳಿಸಿ, ಜ್ಞಾನದ ಮಹಾಸಾಗರವೇ ಆಗಿದ್ದ ಬಸವಣ್ಣನವರು ಲಿಂಗ ಸಮಾನತೆ, ಅಸ್ಪೃಶ್ಯತೆ ನಿವಾರಣೆ, ಕಾಯಕ ದಾಸೋಹಗಳ ಪರಿಕಲ್ಪನೆ ಮೂಡಿಸಿ ಸಮಾಜದ ಆರ್ಥಿಕ ಸ್ವಾವಲಂಬನೆ, ಸಮಾನತೆ ತರಲು ಶ್ರಮಿಸಿದರು ಎಂದು ಗುರುದೇವ ಶ್ರೀಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.