ಅಪರಾಧ ಕೃತ್ಯ ತಡೆಗೆ ಠಾಣೆಯಲ್ಲೇ ಹೋಮ, ಹವನ!ಅಪರಾಧ ಕೃತ್ಯಗಳನ್ನು ನಿಯಂತ್ರಿಸಿ ಸಮಾಜದ ಸ್ವಾಸ್ಥ ಕಾಪಾಡುವುದು ಪೊಲೀಸರ ಕರ್ತವ್ಯ. ಆದರೆ, ರಕ್ಷಣೆಯ ಕರ್ತವ್ಯ ನಿರ್ವಹಿಸಬೇಕಾದ ಪೊಲೀಸರೇ ಅಸಹಾಯಕರಾಗಿ ಅಪರಾಧ ಕೃತ್ಯ ತಡೆಯುವಂತೆ ದೇವರ ಹೋಗಿದ್ದಾರೆ. ಮಾತ್ರವಲ್ಲ, ಪೊಲೀಸ್ ಠಾಣೆಯಲ್ಲೇ ನವಗ್ರಹ ಪೂಜೆ, ಹೋಮ, ಹವನ ನೆರವೇರಿಸುವ ಮೂಲಕ ಮೂಢನಂಬಿಕೆಗೆ ಮೊರೆ ಹೋಗಿರುವುದು ಕಂಡುಬಂದಿದೆ. ಇಂತಹ ಪ್ರಸಂಗ ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದಿದೆ.