ಹಿರಿಯ ವಕೀಲ ನಾಪತ್ತೆ: ವಕೀಲರ ಪ್ರತಿಭಟನೆಅಥಣಿ ವಕೀಲರ ಸಂಘದ ಹಿರಿಯ ಸದಸ್ಯ, ಮುಖಂಡ ಸುಭಾಷ ಪಾಟಣಕರ ಎರಡು ದಿನಗಳಿಂದ ಕಾಣೆಯಾಗಿದ್ದು, ದೂರು ನೀಡಿದರೂ ಪತ್ತೆಗೆ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಅಥಣಿ ವಕೀಲರ ಸಂಘದ ಸದಸ್ಯರು ಗುರುವಾರ ಕೋರ್ಟ್ ಕಲಾಪದಿಂದ ದೂರ ಉಳಿದು ಪಾದಯಾತ್ರೆ ಮೂಲಕ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.