ಮೈಕ್ರೋ ಫೈನಾನ್ಸ್ ಸಾಲ: ಪ್ರಾಣಕ್ಕೆ ಶೂಲಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಿ ನೆಪದಲ್ಲಿ ಸಾಲಗಾರರಿಗೆ ನಿತ್ಯ ಕಿರುಕುಳ ನೀಡುತ್ತಿದ್ದು, ಸಾಲದ ಶೂಲಕ್ಕೆ ಜನ ಹೈರಾಣಾಗಿದ್ದಾರೆ. ಫೈನಾನ್ಸ್ ಸಿಬ್ಬಂದಿ ಕಿರುಕುಳ ಜನರ ಪ್ರಾಣಕ್ಕೆ ಕುತ್ತು ತಂದಿದೆ. ಸಾಲ ವಸೂಲಿಗಾಗಿ ಸಾರ್ವಜನಿಕರ ಎದುರೇ ಮರ್ಯಾದೆ ತೆಗೆಯುವುದು, ಮನೆಯಲ್ಲಿನ ಸದಸ್ಯರನ್ನೂ ಹೊರಹಾಕಿ ಮನೆ ಜಪ್ತಿ ಮಾಡುವಂತಹ ಅಮಾನವೀಯ ಘಟನೆಗಳು ಬೆಳಗಾವಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ.