ಮಗನನ್ನು ಹೆತ್ತವರ ಮಡಿಲು ಸೇರಿಸಿದ ಪೊಲೀಸರು!ಛತ್ತೀಸಗಡದ ಪಲಾರಿ ಜಿಲ್ಲೆಯ ದಾಮ್ಮಿ ಗ್ರಾಮದ ತನ್ನ ಹೆತ್ತವರಿಂದ ಕ್ಷುಲ್ಲಕ ಕಾರಣಕ್ಕಾಗಿ ದೂರವಾಗಿ ದಾರಿಯಲ್ಲಿ ಸಿಕ್ಕ, ಸಿಕ್ಕ ರೈಲನ್ನೇರಿ ಖಾನಾಪುರಕ್ಕೆ ಬಂದಿಳಿದು ಅಲ್ಲಿ, ಇಲ್ಲಿ ಅಲೆಯುತ್ತಿದ್ದ 10 ವರ್ಷದ ಬಾಲಕನನ್ನು ಖಾನಾಪುರ ಪೊಲೀಸರು ರಕ್ಷಣೆ ಮಾಡಿ ಹೆತ್ತರ ಮಡಿಲು ಸೇರಿಸಿದ್ದಾರೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಬಾಲಕನ ಹೆತ್ತವರನ್ನು ಸಂಪರ್ಕಿಸಿ ಅವರಿಗೆ ಬಾಲಕನನ್ನು ಸುರಕ್ಷಿತವಾಗಿ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.