ಉತ್ತಮ ಇಳುವರಿ ಬರುವ ಕಬ್ಬನ್ನು ಪೂರೈಸಿ: ಪರಪ್ಪ ಸವದಿಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಹಿತ ಕಾಪಾಡುವ ಕಾರ್ಖಾನೆಯಾಗಿದ್ದು, ರೈತರಿಗೆ ತೂಕದಲ್ಲಿ ಯಾವುದೇ ಮೋಸವಾಗದಂತೆ ಎಚ್ಚರಿಕೆ ವಹಿಸಿ ಪಾರದರ್ಶಕ ಆಡಳಿತದಿಂದ ಉತ್ತಮ ದರ ನೀಡುತ್ತ ಬಂದಿದ್ದೇವೆ. ಪ್ರಸಕ್ತ ವರ್ಷದಲ್ಲಿ ರೈತರು ಉತ್ತಮ ಇಳುವರಿಯ ಕಬ್ಬನ್ನು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕು ಎಂದು ಅಧ್ಯಕ್ಷ ಪರಪ್ಪಣ್ಣ ಸವದಿ ರೈತರಲ್ಲಿ ಮನವಿ ಮಾಡಿದರು.