ದೇಶದ ಸ್ವಾತಂತ್ರ್ಯಕ್ಕೆ ಚನ್ನಮ್ಮನ ಹೋರಾಟ ಸ್ಫೂರ್ತಿ: ಮೊಹಮ್ಮದ ರೋಷನ್ವೀರ ರಾಣಿ ಕಿತ್ತೂರು ಚನ್ನಮ್ಮಾಜಿ ಬ್ರಿಟಿಷರೊಡನೆ ರಾಜಿ ಮಾಡಿಕೊಳ್ಳದೆ ಕೆಚ್ಚೆದೆಯ ಹೋರಾಟ ಮಾಡಿರುವುದು ಅವರ ದೇಶ ಪ್ರೇಮ, ನಿಷ್ಠೆ, ತ್ಯಾಗ, ಬಲಿದಾನ, ಶೌರ್ಯ, ಸಾಹಸದ ಪ್ರತೀಕವಾಗಿದೆ. ಈ ಹೋರಾಟದ ಪ್ರೇರಣೆಯಿಂದಲೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದರು.