ಬಸ್ ಹತ್ತಿ ಕಳ್ಳತನದ ಜಾಗೃತಿ ಮೂಡಿಸಿದ ಮಹಿಳಾ ಪಿಎಸ್ಐಕನ್ನಡಪ್ರಭ ವಾರ್ತೆ ಕಾಗವಾಡ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡುತ್ತಿರುವುದರಿಂದ ಜನದಟ್ಟಣೆಯ ಲಾಭ ಪಡೆದು ಕಳ್ಳರು ಕೈಚಳಕ ತೋರಿಸುವ ಹಾಗೂ ಪ್ರಸಾದ ಎಂದು ಸಿಹಿ ತಿನಿಸು ಕೊಟ್ಟು ಪ್ರಜ್ಞೆ ತಪ್ಪಿಸಿ ವಂಚನೆ ಎಸಗುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆ ಕಾಗವಾಡ ಠಾಣೆ ಪಿಎಸ್‌ಐ ಜಿ.ಜಿ.ಬಿರಾದಾರ ಬಸ್ ನಿಲ್ದಾಣ ಹಾಗೂ ಬಸ್‌ಗಳಲ್ಲಿ ಕಳ್ಳತನ ಕುರಿತಂತೆ ಕರಪತ್ರ ಹಂಚಿ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಗಮನ ಸೆಳೆಯುತ್ತಿದೆ.